ಹೋಳಿಹುಣ್ಣಿಮೆಯಂದು ನೆರವೇರಿದ ‘ದೊಡ್ಮನೆ ಹುಡ್ಗ ಚಿತ್ರದ ಮುಹೂರ್ತ ಸಮಾರಂಭ
Posted date: 06 Fri, Mar 2015 – 11:28:25 AM

ಅಜಯ್ ಪಿಕ್ಚರ‍್ಸ್ ಲಾಂಛನದಲ್ಲಿ ಎಂ.ಗೋವಿಂದು ಅವರು ನಿರ್ಮಿಸುತ್ತಿರುವ ‘ದೊಡ್ಮನೆ ಹುಡ್ಗ ಚಿತ್ರದ ಮುಹೂರ್ತ ಹೋಳಿಹುಣ್ಣಿಮೆಯ ಶುಭದಿನದಂದು ನೆರವೇರಿತು. ಪುನೀತ್‌ರಾಜಕುಮಾರ್ ಅವರ ಮನೆಯ ಮುಂದಿರುವ ಗಣಪತಿಗೆ ಪೂಜೆ ಸಲ್ಲಿಸುವುದರೊಂದಿಗೆ ಮುಹೂರ್ತ ಸಮಾರಂಭ ಆರಂಭವಾಯಿತು.
    ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಆರಂಭ ಫಲಕ ತೋರಿದರು. ಪಾರ್ವತಮ್ಮರಾಜಕುಮಾರ್, ಸೆಂಚುರಿಸ್ಟಾರ್ ಶಿವರಾಜಕುಮಾರ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
    ಸೂರಿ ಹಾಗೂ ವಿಕಾಸ್ ಅವರು ಬರೆದಿರುವ ಕಥೆಗೆ ಸೂರಿ ಅವರೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು.ಎಸ್.ಕುಮಾರ್ ಸಂಕಲನ, ಶಶಿಧರ ಅಡಪ ಅವರ ಕಲಾ ನಿರ್ದೇಶನವಿದೆ. ವಿ.ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ.   
   ಪುನೀತ್‌ರಾಜಕುಮಾರ್, ರಾಧಿಕಾ ಪಂಡಿತ್, ರೆಬಲ್‌ಸ್ಟಾರ್ ಅಂಬರೀಶ್, ಸುಮಲತ ಅಂಬರೀಶ್, ಭಾರತಿ ವಿಷ್ಣುವರ್ಧನ, ಶ್ರೀನಿವಾಸಮೂರ್ತಿ, ಅವಿನಾಶ್, ರಂಗಾಯಣ ರಘು, ರವಿಶಂಕರ್, ಉದಯ್, ಚಿಕ್ಕಣ್ಣ, ಸಂತೋಷ್ ರಾಜವರ್ಧನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed